ಕಾಲೇಜಿಗೆ ಹೋಗುತ್ತಿದ್ದಾಗ ಬರೆದಿದ್ದು. ಹೀಗೆ, ಕಸ ತೆಗೆಯುವಾಗ ಕೈಗೆ ಸಿಕ್ಕಿ ನಗು ಬರಿಸಿಬಿಟ್ಟಿತು. ನೀವೂ ಓದಿ ನೋಡಿ.
ರಜಿನಿ,
ನಿನ್ನ ಒಡಲಲ್ಲಿ,
ಮೇಲೊಂದು ಚುಕ್ಕಿ,
ಕೆಳಗೊಂದು ಚುಕ್ಕಿ,
ಮೇಲೆ ಮತ್ತೊಂದು,
ಕೆಳಗೆ ಅದಕೊಂದು,
ವಿಶ್ವಾಮಿತ್ರಾ ಹುಟ್ಟಿಸಿದನೇನು ಅಣಕ?
ಊಹೂಂ, ಇದು ಸ್ವಯಂಕೃತಾಪರಾಧ!
ಇಲ್ಲಿ ಒಬ್ಬೊಬ್ಬನೂ ತ್ರಿಶಂಕು,
ಏಕೆ ನಾನು?
ಎಲ್ಲಿಗೆ ನಾನು?
ಏನು ನಾನು?
ಆಮೇಲೇನು?
ಯಾರಿಗೂ ಗೊತ್ತಿಲ್ಲ
ಬೇಕೆ? ಅದೂ ಇಲ್ಲ
ತಿಳಕೊಳ್ಳಲು ಸಮಯವಿಲ್ಲ!
ಮೃಗಶಿರ : ಹಲವು ಕಥೆಗಳ ಒಂದು ಸುಂದರ ಗುಚ್ಛ
-
*ಯಾ*ವುದೇ ಪುಸ್ತಕವನ್ನು ಅದರ ಮುಖಪುಟವನ್ನು ನೋಡಿ ಅಳೆಯದಿರು ಎಂದು ಹೇಳುತ್ತಾರೆ. ಅಂತೆಯೇ
ಓರ್ವ ವ್ಯಕ್ತಿಯ ಬದುಕನ್ನು ಅರಿಯುವಾಗ, ಕೇವಲ ಆತನ ಏಕಪಕ್ಷೀಯ ಮಾತುಗಳನ್ನು, ಅವರಿವರು
ಹೇಳಿದ್ದ...
2 ವಾರಗಳ ಹಿಂದೆ

