ಹಾಯ್,
ಎಷ್ಟೊಂದು ದಿನ ಆದಮೇಲೆ ಬರ್ತಾ ಇದೀನಿ, ಆದರೆ ನಿಮಗೆಲ್ಲಾ ಏನಾದ್ರೂ ಓದೋಕೆ ಕೊಡೋಣ ಅಂದ್ರೆ ನನ್ನ ಕೈಲಿ ಸದ್ಯಕ್ಕೆ ಆಗ್ತಿಲ್ಲ. ಬದಲಾಗಿ ನನಗೆ ನಿಮ್ಮೆಲ್ಲರಿಂದ ಒಂದು ಸಹಾಯ ಬೇಕು.
೧ರಿಂದ ೫ನೇ ತರಗತಿಯ ಮಕ್ಕಳಿಗೆ ಕನ್ನಡವನ್ನು ಹೇಳಿಕೊಡಲು ಹೊಸ ಹೊಸ ವಿಧಾನಗಳೇನಾದರೂ ಬಂದಿವೆಯೇ? ಮಕ್ಕಳಿಗೆ ಬಹಳ ಮೋಜು ಎನಿಸಬೇಕು, ಅವರ ಭಾಷಾ ಸಾಮರ್ಥ್ಯ ಹೆಚ್ಚಾಗಬೇಕು. ಅಂತಹ ಸಂಸ್ಥೆಗಳೇನಾದರೂ ತಿಳಿದಿವೆಯೇ? ತಿಳಿದಿದ್ದರೆ ನನಗೆ ಅಂತಹ ಸಂಸ್ಥೆ ಅಥವಾ ವ್ಯಕ್ತಿಗಳ ಪರಿಚಯ ಮಾಡಿಕೊಡಿ.
ನಾನು ಹೀಗೇಕೆ ಕೇಳುತ್ತಿದ್ದೇನೆಂದು ತಿಳಿದುಕೊಳ್ಳಲು ಈ ಲಿಂಕ್ ನೋಡಿ. ನಾನು ಈ ಸಂಸ್ಥೆಯ ಜೊತೆ ಸದ್ಯ ಪ್ರಾಜೆಕ್ಟ್ ಒಂದನ್ನು ಮಾಡುತ್ತಿದ್ದೇನೆ :)
www.hlc.org.in
ಹೇಮಾ
ಮೃಗಶಿರ : ಹಲವು ಕಥೆಗಳ ಒಂದು ಸುಂದರ ಗುಚ್ಛ
-
*ಯಾ*ವುದೇ ಪುಸ್ತಕವನ್ನು ಅದರ ಮುಖಪುಟವನ್ನು ನೋಡಿ ಅಳೆಯದಿರು ಎಂದು ಹೇಳುತ್ತಾರೆ. ಅಂತೆಯೇ
ಓರ್ವ ವ್ಯಕ್ತಿಯ ಬದುಕನ್ನು ಅರಿಯುವಾಗ, ಕೇವಲ ಆತನ ಏಕಪಕ್ಷೀಯ ಮಾತುಗಳನ್ನು, ಅವರಿವರು
ಹೇಳಿದ್ದ...
2 ವಾರಗಳ ಹಿಂದೆ

